ಮಲೆನಾಡಿಗರ ಮನೆಮನೆಗಳಲ್ಲಿನ ಈ ಸಾಂಪ್ರದಾಯಿಕ ಸಿಹಿತಿಂಡಿಯಾದ ತೊಡೆದೇವು ಈಗ ಹೊಸ ರೂಪದಲ್ಲಿ..!
ತೊಡೆದೇವು ಹಿನ್ನಲೆ:
ಕಬ್ಬಿನ ಹಾಲು ಇದರ ಮೂಲ. ಆಲೆಮನೆ ಸಮಯದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಹೆಚ್ಚು ಶ್ರಮ ಹಾಗೂ ಶ್ರದ್ಧೆ ಬೇಡುವ ತಿಂಡಿ ಇದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುಗೆ ತುಂಬ ಬೇಡಿಕೆಯಿದೆ . ಆದರೆ, ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ .ಗರಿಗರಿ ದೋಸೆಯನ್ನು ಹೋಲುತ್ತದೆ. ಶಿರಸಿ, ಯಲ್ಲಾಪುರ, ಸಿದ್ಧಾಪುರ, ಕುಮುಟಾ, ಗೋಕರ್ಣಾ, ಸಾಗರ ಸುತ್ತಮುತ್ತ ಈ ತಿನಿಸು ಫೇಮಸ್. ಈಗೀಗ ಎಲ್ಲ ಸೀಸನ್ಗಳಲ್ಲೂ ಇದು ಲಭ್ಯ. ಗರಿಗರಿ ತೊಡೆದೇವಿಗೆ ತುಪ್ಪ ಅಥವಾ ಹಾಲನ್ನು ಹಾಕಿಕೊಂಡು ತಿನ್ನುವುದರ ಮಜಾವೇ ಬೇರೆ.
Vivek Raghupathy –
Manoj Kashyap –
Qty is less…..Compare to price
Madhu Hiremane –
N P. –
Totally perfect