Blog

ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು

Health benefits of coconut oil

ವೃಕ್ಷಜಗತ್ತಿನ ಕಲ್ಪವೃಕ್ಷ ಎಂದೇ ಪ್ರಖ್ಯಾತವಾದದ್ದು ನಾರೀಫಲ ಎಂದೇ ಕರೆಸಿಕೊಳ್ಳುವ ತೆಂಗಿನ ಕಾಯಿ. ಮುಕ್ಕಣ್ಣುಳ್ಳ ಕಾಯಿಗೆ ದೇವನೈವೇದ್ಯದಿಂದ ತೊಡಗಿ, ಅಡುಗೆಮನೆಯ ಮುಖ್ಯ ಆಹಾರವಾಗುವವರೆಗೆ ಭಾರತೀಯ ಅಡುಗೆಯಲ್ಲಿ ಪ್ರಾಶಸ್ತ್ಯ ಕಲ್ಪಿಸಲಾಗಿದೆ.

ದಕ್ಷಿಣ ಭಾರತದ ಹಲವು ಕಡೆ ಈಗಲೂ ಕೂಡ ಬಹುತೇಕ ಮಂದಿ ಸೂರ್ಯಕಾಂತಿ ಎಣ್ಣೆ ಅಥವಾ ಮಾರುಕಟ್ಟೆಗಳಲ್ಲಿ ಸಿಗುವ ಇನ್ನಿತರ ಅಡುಗೆ ಎಣ್ಣೆಗಳ ಬದಲಾಗಿ ತೆಂಗಿನ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಕೇರಳ ಮತ್ತು ತಮಿಳುನಾಡು ಇದಕ್ಕೆ ತಾಜಾ ಉದಾಹರಣೆ.

ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು :

೧. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ
ಕೊಬ್ಬರಿಯಲ್ಲಿನ ಆಮ್ಲಗಳಾದ (MCFAs) ಲಾರಿಕ್ ಆಮ್ಲ, ಕ್ಯಾಪ್ರಿಲಿಕ್ ಆಮ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

೨. ದೇಹದ ತೂಕ ಇಳಿಸಲು ತೆಂಗಿನ ಎಣ್ಣೆ ಸಹಾಯ ಮಾಡಬಲ್ಲದು
ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ , ನಿಮ್ಮ ದೇಹದಲ್ಲಿ ಹಲವಾರು ಅಂಗಾಂಗಗಳಲ್ಲಿ ಸೇರಿಕೊಂಡು ಅವುಗಳ ಕಾರ್ಯ ದಕ್ಷತೆಗೆ ಅಡ್ಡಿ ಪಡಿಸುವ ಕೊಬ್ಬಿನ ಅಂಶವನ್ನು ಕರಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

೩. ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ
ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಮತ್ತು ಕೊಬ್ಬಿನಾಮ್ಲಗಳಿವೆ. ಇವು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೆತ್ತಿಗೆ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ. ಆ ಮೂಲಕ ಕೂದಲಿನ ನೈಸರ್ಗಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

೪. ತೆಂಗಿನ ಎಣ್ಣೆಯ ಸೇವನೆಯಿಂದ ಲಿಪಿಡ್ ಅಂಶಗಳು ಅಭಿವೃದ್ಧಿ ಹೊಂದುತ್ತವೆ
ನಿತ್ಯ ನಿಯಮಿತವಾಗಿ ತೆಂಗಿನ ಎಣ್ಣೆಯನ್ನು ನಮ್ಮ ಪ್ರತಿ ದಿನದ ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾ ಬಂದರೆ ಕ್ರಮೇಣವಾಗಿ ನಮ್ಮ ರಕ್ತದಲ್ಲಿನ ಲಿಪಿಡ್ ಮಟ್ಟಗಳು ಏರಿಕೆ ಕಂಡು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

೫. ಅಪಾಯಕಾರಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ
ನಾವು ಯಾವುದೇ ಆಹಾರವನ್ನು ತಿನ್ನುವಾಗ ಅಥವಾ ಉಸಿರಾಡುವ ಸಮಯದಲ್ಲಿ ಗಾಳಿಯನ್ನು ಸೇವಿಸಿದಾಗ ಅದರ ಜೊತೆ ನಮ್ಮ ಕಣ್ಣಿಗೆ ಕಾಣದೆ ಅನೇಕ ರೀತಿಯ ವಿಷಕಾರಿ ಸೂಕ್ಷ್ಮ ಜೀವಿಗಳು ನಮ್ಮ ದೇಹ ಸೇರುತ್ತವೆ. ತೆಂಗಿನ ಎಣ್ಣೆ ತನ್ನಲ್ಲಿರುವ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳಿಂದ ಈ ರೀತಿಯ ಸೂಕ್ಷ್ಮ ಜೀವಾಣುಗಳ ಜೊತೆ ಹೋರಾಡುತ್ತದೆ.

೬. ಚರ್ಮವನ್ನು ತೇವಗೊಳಿಸುತ್ತದೆ
ತೆಂಗಿನ ಎಣ್ಣೆಯನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಗುಣಮಟ್ಟದ ತೆಂಗಿನ ಎಣ್ಣೆ ಉತ್ತಮ ಪರಿಮಳ ಹೊಂದಿದೆ. ಮಧ್ಯಮ ಸರಣಿ ಕೊಬ್ಬಿನಾಮ್ಲಗಳು ಇದರಲ್ಲಿ ಹೇರಳವಾಗಿವೆ. ಇದನ್ನು ಮುಖ ಮತ್ತು ದೇಹದ ಮಾಯಿಶ್ಚರೈಸರ್ ಆಗಿ ಬಳಸಲಾಗುತ್ತದೆ. ಚರ್ಮವನ್ನು ಮೃದುಗೊಳಿಸಲು ಸಹ ಇದು ಸಹಾಯ ಮಾಡುತ್ತದೆ.

ತೆಂಗಿನ ಎಣ್ಣೆಯ ಮಹತ್ವವನ್ನು ಅರಿತಿರುವ ರಾ ಗ್ರಾನ್ಯೂಲ್ಸ್ ಸಂಸ್ಥೆ, ಮಲೆನಾಡಿನ ಶುದ್ಧ ತೆಂಗಿನ ಎಣ್ಣೆಯನ್ನು ನಗರವಾಸಿಗಳಿಗೆ ತಲುಪಿಸುತ್ತಿದೆ. ಇಂದೇ ಆರ್ಡರ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *