Blog

ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

clove

ಲವಂಗ ಭಾರತೀಯ ಅಡುಗೆ ಪದ್ಧತಿಯಲ್ಲಿ ಧಾರಾಳವಾಗಿ ಬಳಕೆಯಾಗುವ ಮಸಾಲೆ ಪದಾರ್ಥ. ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ಮಸಾಲೆ ಪದಾರ್ಥಗಳಲ್ಲಿ ಲವಂಗವೂ ಇದ್ದು ಅದು ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ಅಷ್ಟೇ ಅಲ್ಲದೆ ಔಷಧಿ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಪ್ರತಿ ದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಲವಂಗದಲ್ಲಿ ಔಷಧಿ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ.

ಲವಂಗದಲ್ಲಿದೆ ಔಷಧಿ ಗುಣ: ಲವಂಗ(Cloves)ದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್
, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಲವಂಗದಲ್ಲಿ ವಿಟಮಿನ್ ಸಿ ಅಂಶಗಳಿದೆ. ಇದು ರಕ್ತದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಲವಂಗವು ರೋಗನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದರಿಂದಾಗಿ ಲವಂಗವು ದೇಹದ ಅನೇಕ ರೋಗಗಳನ್ನು ಬುಡದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.

೧. ಬಾಯಿ ಮತ್ತು ಗಂಟಲಿನ ಆರೋಗ್ಯ

ಹಲ್ಲು ನೋವಿದ್ದರೆ ಆ ಭಾಗಕ್ಕೆ ಲವಂಗ ಇಟ್ಟರೆ ಸಾಕು ನೋವು ಕಡಿಮೆಯಾಗುವುದು.ಶೀತ, ಗೆಂಟಲು ಕೆರತ ಇದ್ದರೆ ಇದನ್ನು ಹಾಕಿ ತಯಾರಿಸಿದ ಟೀ ಕುಡಿದರೆ ಈ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದು.
ಬಾಯಿ ಹುಣ್ಣಾದರೆ ಇದನ್ನು ಜಗಿದರೆ ಸಾಕು, ಹುಣ್ಣು ಬೇಗನೆ ಒಣಗುವುದು

೨. ಹೊಟ್ಟೆ ಸಮಸ್ಯೆಯನ್ನು ಪರಿಹರಿಸುತ್ತದೆ
ಬೇಧಿ ಉಂಟಾದರೆ ಲವಂಗ ತಿಂದರೆ ಸಾಕು ತಕ್ಷಣ ಕಡಿಮೆಯಾಗುವುದು. ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆ, ತಲೆ ಸುತ್ತು ಈ ರೀತಿ ಕಂಡು ಬಂದರೆ ಲವಂಗ ತಿಂದರೆ ಸಾಕು ಕಡಿಮೆಯಾಗುವುದು. ಅಜೀರ್ಣ ಸಮಸ್ಯೆ ಇದ್ದವರು ಊಟದ ನಂತರ ಒಂದು ಲವಂಗ ತಿಂದರೆ ಸಾಕು ಆ ಸಮಸ್ಯೆಯಿಂದ ಪರಿಹಾರ ಹೊಂದಬಹುದು.

೩. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ಲವಂಗ ತಿಂದರೆ ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ರಕ್ತ ಸಂಚಾರ ದೇಹದ ಎಲ್ಲಾ ಭಾಗಗಳಿಗೆ ಸರಿಯಾಗಿ ಸಂಚಾರವಾಗುವಂತೆ ಮಾಡುತ್ತದೆ.

೪. ಗಾಯವನ್ನು ಗುಣಪಡಿಸಲು
ತ್ವಚೆ ಗಾಯವಾಗಿ ಊದಿಕೊಂಡಿದ್ದರೆ ಆ ಭಾಗಕ್ಕೆ ಇದರ ಪೇಸ್ಟ್ ಅನ್ನು ಹಚ್ಚಿದರೆ ಸಾಕು ಊತ ಕಡಿಮೆಯಾಗುವುದು. ಗಾಯ ಕೂಡ ಗುಣಮುಖವಾಗುತ್ತದೆ.

೫. ಸಂಧಿ ನೋವು ಕಡಿಮೆ ಮಾಡುತ್ತದೆ
ಸಂಧಿ ನೋವು ಇದ್ದವರು ಇದನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಆ ಭಾಗಕ್ಕೆ ಹಚ್ಚುವುದರಿಂದ ಸಂಧಿ ನೋವು ಕಡಿಮೆಯಾಗುವುದು. ಅಡುಗೆಯಲ್ಲಿ ಲವಂಗವನ್ನು ಬಳಸಿ.

೬. ತಲೆನೋವಿಗೆ ಲವಂಗ ಪರಿಹಾರ ನೀಡುತ್ತದೆ
ಲವಂಗದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ತಲೆನೋವು ಗುಣವಾಗುತ್ತದೆ. ಲವಂಗದಲ್ಲಿ ಊತವನ್ನು ಇಳಿಸುವ ಗುಣಗಳಿವೆ. ಹಾಗಾಗಿ ಇವು ನೋವುಗಳ ನಿವಾರಣೆಯಲ್ಲಿ ಬಳಕಯಾಗುತ್ತವೆ.

೭. ಲಿವರ್ ಅಥವಾ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚಿಸುವ ತಾಕತ್ತು ಲವಂಗದಲ್ಲಿದೆ.
ನಮ್ಮ ದೇಹದೊಳಗಿನ ಎಲ್ಲಾ ಟಾಕ್ಸಿನ್ ಅಥವಾ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಲಿವರ್​ಗಿದೆ. ಆ ಲಿಬರ್ ಸರಿಯಾಗಿ ಕೆಲಸ ಮಾಡದಿದ್ದರೆ ಸಮಸ್ಯೆಯಾಗುತ್ತದೆ. ಲವಂಗ ಲಿವರ್​ನ ಆರೋಗ್ಯ ಕಾಪಾಡುತ್ತದೆ.

೮. ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣದಲ್ಲಿ ನೆರವಾಗುವುದು
ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗದಂತೆ ನೋಡಿಕೊಳ್ಳುವುದೇ ಮಧುಮೇಹ ನಿಯಂತ್ರಣದ ಕ್ರಮವಾಗಿದೆ. ಮಧುಮೇಹದ ಸಮಸ್ಯೆ ಇರುವವರಿಗೆ ಲವಂಗ ಸೂಕ್ತವಾಗಿದೆ, ಏಕೆಂದರೆ ಅವು ದೇಹದೊಳಗಿನ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತವೆ

ಇದನ್ನು ಅರಿತಿರುವ ರಾ ಗ್ರಾನುಲ್ಸ್ ಸಂಸ್ಥೆ ಮಲೆನಾಡಿನಲ್ಲಿ ಸಂಗ್ರಹಿಸಿದ ಲವಂಗವನ್ನು ಶೇಖರಿಸಿ ಗ್ರಾಹಕರಿಗೆ ನೀಡುತ್ತಿದೆ. ಖರೀದಿಸಲು ಈ ಕೆಳಗಿನ ಲಿಂಕ್ ಬಳಸಿ.

https://rawgranules.in/product/clove-lavanga/

Leave a Reply

Your email address will not be published. Required fields are marked *