ಜೇನುತುಪ್ಪ (Benefits Of Honey) ಎಂದಾಕ್ಷಣ ಬಾಯಲ್ಲಿ ನೀರೂರುವುದು ಸಹಜ. ಪರಿಸರಕ್ಕೆ ಸಂಬಂಧಿಸಿ, ವಿಧವಿಧ ಹೂವುಗಳಿಂದ ಸಿದ್ಧವಾಗುವ ಈ ಜೇನುಹುಳುಗಳ ನಳಪಾಕ ಸವಿದಷ್ಟೂ ಸವಿಯೇ ಸರಿ. ಅದೆಷ್ಟೋ ಔಷಧಗಳ ಮುಖ್ಯ ಭಾಗವಾಗಿರುವ ಜೇನುತುಪ್ಪದ ಕೆಲವು ಉಪಯೋಗಗಳನ್ನು ತಿಳಿಯೋಣ ಬನ್ನಿ.
ಉಪಯೋಗಗಳು (Benefits Of Honey)
ಜೇನುತುಪ್ಪ ನೂರಾರು ಉಪಯೋಗಗಳನ್ನು ಒಳಗೊಂಡಿದೆ.
ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಜೊತೆಗೆ ನಮ್ಮ ಚರ್ಮವನ್ನು ಸಂರಕ್ಷಿಸುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.
ಇನ್ನೂ ಕೆಲವರು ಬಾಯಿಹುಣ್ಣಿನಿಂದ ನರಳುತ್ತಿರುತ್ತಾರೆ. ಅಂತವರಿಗೆ ಈ ಜೇನುತುಪ್ಪವು ರಾಮಬಾಣವಾಗಿ ಸಹಕರಿಸುತ್ತದೆ.
ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ ಗಾಯವನ್ನು ಗುಣಪಡಿಸುವ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.
ಜೊತೆಗೆ ಬೊಜ್ಜು ಕರಗಿಸಲು ಕೂಡ ಸಹಾಯವಾಗುತ್ತದೆ.ತಣ್ಣನೆಯ ನೀರಿಗೆ ಒಂದೆರಡು ಚಮಚ ಜೇನು ಹನಿ ಬೆರೆಸಿ ಪ್ರತಿನಿತ್ಯ ಸೇವಿಸಿದರೆ ನಿಮ್ಮ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.
ಅಲ್ಲದೇ ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.
ಇನ್ನು ಕೆಲವರಿಗೆ ಪದೇ ಪದೇ ಬಾಯಾರಿಕೆ ಆಗುವುದರಿಂದ ಸದಾ ಕಿರಿಕಿರಿ ಅನುಭವಿಸುತ್ತಾರೆ.ಈ ರೀತಿಯ ಸಮಸ್ಯೆ ಇರುವವರು ಜೇನುತುಪ್ಪವನ್ನು ಸೇವಿಸಿದರೆ ಉತ್ತಮ.
ಕೆಲವೊಮ್ಮೆ ಆಹಾರದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ತಪ್ಪಿಸಲು ಈ ಜೇನು ಸಹಕಾರಿಯಾಗುತ್ತದೆ. ಅಲ್ಲದೇ ಚರ್ಮಕ್ಕೂ ಕೂಡ ಇದು ಬಹಳ ಒಳ್ಳೆಯದು.
ಇಷ್ಟೇ ಅಲ್ಲದೇ ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ. ಹೀಗಾಗಿ ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.
ಯಾಕೆಂದರೆ ಕಲಬೆರಕೆ ಮಿಶ್ರಿತ ಜೇನಿನಲ್ಲಿ ಈ ಮೇಲಿನ ಅಂಶಗಳು ಇರುವುದಿಲ್ಲ. ಆದರೆ ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸದರೆ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು .
ಇಷ್ಟೆಲ್ಲ ಉಪಯೋಗಗಳಿದ್ದರೂ ಇದರ ಕಲಬೆರಕೆ ಮಾರುಕಟ್ಟೆಯಲ್ಲಿರುವ ದೊಡ್ಡ ಸಮಸ್ಯೆ. ಶುದ್ಧ ಜೇನನ್ನು ನೀಡುವುದು ಮತ್ತು ಸವಿಯುವುದು ಗ್ರಾಹಕರಿಗೆ ನಿಜ ಸಮಸ್ಯೆಯೇ ಆಗಿದೆ.
ಇದಕ್ಕೆ ಪರಿಹಾರ ರೂಪವಾಗಿಯೇ ರಾ ಗ್ರಾನ್ಯೂಲ್ಸ್ ಸಂಸ್ಥೆ ಮಲೆನಾಡ ರೈತರಿಂದ ನೇರ ಸಂಗ್ರಹಿಸಿದ ಶುದ್ಧ ಜೇನುತುಪ್ಪ (Benefits Of Honey) ವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದೆ. ಅಗತ್ಯವಿದ್ದವರು ಈ ಕೆಳಗಿನ ಲಿಂಕ್ ಮೂಲಕ ಖರೀದಿಸಬಹುದಾಗಿದೆ.