Blog

Benefits of nutmeg-ಜಾಯಿಕಾಯಿಯ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತಾ…!!

benefits of nutmeg

Benefits of nutmeg-ಭಾರತ ಸಾಂಬಾರ ಪದಾರ್ಥಗಳ ತವರು. ಸಾಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದಂತಹ ವಿದೇಶಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎನ್ನುವುದು ಈಗ ಇತಿಹಾಸ.

ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ ಪ್ರತಿಯೊಂದು ಕಡೆಯೂ ಯಾವುದಾದರೂ ಒಂದು ಸಾಂಬಾರ ಪದಾರ್ಥವನ್ನು ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಾಂಬಾರ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುವುದು. ಯಾವುದೇ ಖಾದ್ಯವಾದರೂ ವಿಶೇಷ ರುಚಿ ನೀಡುವಂತಹ ಸಾಂಬಾರ ಪದಾರ್ಥಗಳಲ್ಲಿ ಜಾಯಿಕಾಯಿ ಕೂಡ ಒಂದು.

ಜಾಯಿಕಾಯಿಯಲ್ಲಿ ಇರುವಂತ ಹಲವು ಔಷಧೀಯ ಗುಣಗಳನ್ನು ಪೂರ್ವಜರು ಬಲ್ಲವರಾಗಿದ್ದರು. ಜಾಯಿಕಾಯಿಯು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಅಂತಹ ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ…

Benefits of nutmeg

೧. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು

ಜಾಯಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಜಾಯಿಕಾಯಿ ಎಣ್ಣೆಯಲ್ಲಿ ಫ್ರೀ ರ್ಯಾಡಿಕಲ್ ಶೇಖರಿಸುವ ಚಟುವಟಿಕೆ ಇದೆ ಮತ್ತು ಇದನ್ನು ಕ್ಯಾನ್ಸರ್ ವಿರೋಧಿ ಔಷಧಿಯಲ್ಲಿ ಬಳಸಬಹುದಾಗಿದೆ. ಜಾಯಿಕಾಯಿಯು ಕರುಳಿನಲ್ಲಿ ಗಡ್ಡೆ ಬೆಳೆಯುವುದನ್ನು ತಗ್ಗಿಸಿ ಕರುಳಿನ ಕ್ಯಾನ್ಸರ್ ತಡೆಯುವುದು.

೨. ಚರ್ಮದ ಆರೋಗ್ಯಕ್ಕೆ ಉತ್ತಮ

ಜಾಯಿಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನಿಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳಿಗೆ ಇದು ಪರಿಹಾರ ನೀಡುತ್ತದೆ. ಜಾಯಿಕಾಯಿ ಪುಡಿ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ಮೊಡವೆಗಳ ಮೇಲೆ ಹಚ್ಚಿ 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ ಅಥವಾ ಜಾಯಿಕಾಯಿಯ ಪುಡಿಗೆ ಹಾಲನ್ನು ಸೇರಿಸಿ ಅದನ್ನು ಚರ್ಮಕ್ಕೆ ಹಚ್ಚಿ, ನಿಮಗೆ ಉತ್ತಮ ಪರಿಹಾರ ಲಭಿಸುತ್ತದೆ.

೩. ನಿದ್ರಾಹೀನತೆ ತಡೆಯುವುದು

ಒತ್ತಡದ ಬದುಕಿನಲ್ಲಿ ನಿದ್ರೆ ಎನ್ನುವುದು ಕೂಡ ಕೈಗೆಟುಕದಂತಾಗಿದೆ. ಕೆಲವರಿಗೆ ನಿದ್ರಿಸಲು ಕೂಡ ಸಮಯವಿಲ್ಲ. ಇನ್ನು ಕೆಲವರಿಗೆ ಅತಿಯಾದ ಒತ್ತಡದಿಂದ ನಿದ್ರೆ ಬರಲ್ಲ. ಹೀಗಾಗಿ ಜಾಯಿಕಾಯಿಯು ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವುದು. ಮೈರಿಸ್ಟಿಸಿನ್, ಎಲಿಮಿಸಿನ್ ಎನ್ನುವ ಅಂಶವು ಮನುಷ್ಯನ ಮೆದುಳಿಗೆ ಆರಾಮ ನೀಡುವ ಗುಣ ಹೊಂದಿದೆ. ಇದು ನಿದ್ರೆ ಭರಿಸುವ ಕೆಲಸ ಮಾಡುವ ಗುಣ ಹೊಂದಿದೆ. ಹಿಂದಿನ ಕಾಲದಲ್ಲಿ ಇದನ್ನು ಒತ್ತಡ ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಜಾಯಿಕಾಯಿಯನ್ನು ಔಷಧಿಯಾಗಿ ಬಳಸಲಾಗುತ್ತಿತ್ತು.

೪. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಜಾಯಿಕಾಯಿ ನಿಮ್ಮ ಮೆದುಳಿನಲ್ಲಿರುವ ನರಗಳನ್ನು ಉತ್ತೇಜಿಸುತ್ತದೆ ಇದು ಡಿಪ್ರೆಶನ್, ಆತಂಕ. ಅತಿಯಾದ ಸುಸ್ತು ಇಂಥಹ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ. ತುಂಬಾ ಆತಂಕ ಅನುಭವಿಸುತ್ತಿರುವ ಸಮಯದಲ್ಲಿ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು

೫. ನೋವು ಕಡಿಮೆ ಮಾಡುವುದು ಜಾಯಿಕಾಯಿ ಎಣ್ಣೆಯು ಮುಖ್ಯವಾಗಿ ನೋವು ಹಾಗೂ ಸೆಳೆತ ಕಡಿಮೆ ಮಾಡುವುದು. ಇದನ್ನು ಗಂಟು ಹಾಗೂ ಸ್ನಾಯುಗಳ ನೋವಿಗೆ ಹಚ್ಚಿಕೊಂಡ ವೇಳೆ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಇರುವ ಯುಜೆನಾಲ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಉರಿಯೂತದಿಂದ ಕಾಡುವ ನೋವು ಕಡಿಮೆ ಮಾಡುವುದು.

ಇದನ್ನರಿತ ರಾಗ್ರಾನುಲ್ಸ್ ಸಂಸ್ಥೆ ಜಾಯಿಕಾಯಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ . ಕೂಡಲೇ ಖರೀದಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *