Blog

Benefits of Coconut Herbal Soap|ತ್ವಚೆಯ ಆರೋಗ್ಯಕ್ಕಾಗಿ ಈ ನೈಸರ್ಗಿಕ ಸಾಬೂನನ್ನು ಬಳಸಿ…..

Benefits of Coconut Herbal Soap

ಗಂಡಿರಲಿ, ಹೆಣ್ಣಿರಲಿ ತಮ್ಮ ಕೂದಲು ಹಾಗೂ ಚರ್ಮದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಯೋಚಿಸುತ್ತಾರೆ. ನಮ್ಮ ಮನೆಯಲ್ಲೇ ಸಿಗುವ ತೆಂಗಿನಕಾಯಿಯಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಬಂದಾಗ ತೆಂಗಿನಕಾಯಿ ಅದಕ್ಕೆ ಹೇಳಿಮಾಡಿಸಿದ್ದು. ನಾರೀಫಲ ಎಂದೇ ಕರೆಸಿಕೊಳ್ಳುವ ತೆಂಗಿನ ಕಾಯಿಯ ಆರೋಗ್ಯ ಪ್ರಯೋಜನಗಳು ಅಗಾಧ. ತೆಂಗಿನ ಮರದ ಪ್ರತಿಯೊಂದು ಭಾಗವು ಕೂಡ ಮನುಷ್ಯನಿಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ . ಇನ್ನು ತೆಂಗಿನಕಾಯಿ ವಿಷಯಕ್ಕೆ ಬರುವುದಾದರೆ ಅದು ಎಳನೀರಿನ ಸಮಯದಿಂದ ಹಿಡಿದು ಕೊಬ್ಬರಿಯ ತನಕ ಎಲ್ಲರಿಂದಲೂ ಮತ್ತು ಎಲ್ಲರ ಮನೆಯಲ್ಲೂ ಉಪಯೋಗಿಸಲ್ಪಡುತ್ತದೆ. ಅಂತಹ ತೆಂಗಿನ ಕಾಯಿ ಇಂದ ತಯಾರಿಸಲ್ಪಟ್ಟ ಸಾಬೂನಿನ ಬಗ್ಗೆ ತಿಳಿದುಕೊಳ್ಳೋಣ.

Benefits of Coconut Herbal Soap:

ತೆಂಗಿನ ಕಾಯಿಯಲ್ಲಿ ವಿಟಮಿನ್ ಇ ನಂತಹ ಅದರ ವಿವಿಧ ಅಂಶಗಳಿವೆ. ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಚರ್ಮದ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಅಂದರೆ, ಚರ್ಮದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಮೈಬಣ್ಣವನ್ನು ಸ್ವಚ್ಛಗೊಳಿಸುತ್ತದೆ.
ಕಡಿಮೆ ತೂಕದೊಂದಿಗೆ ಹುಟ್ಟಿದ ಮಗುವಿನ ಚರ್ಮದ ಆರೋಗ್ಯ ಸುಧಾರಿಸಲು ತೆಂಗಿನೆಣ್ಣೆ ಅನುಕೂಲಕರವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.

ತೆಂಗಿನ ಕಾಯಿಯಲ್ಲಿ ಕಂಡುಬರುವ ನೈಸರ್ಗಿಕ ಗುಣಗಳು ಚರ್ಮದಲ್ಲಿನ ಕಾಲಜನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದಿಂದ ಸುಕ್ಕುಗಳು, ಗುಳಿಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕುತ್ತದೆ. ಏಕೆಂದರೆ ಕಾಲಜನ್ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ನಿಮಗೆ ಯೌವ್ವನದ ಚರ್ಮವನ್ನು ನೀಡುತ್ತದೆ.
ನಿಮ್ಮ ಮೇಕ್ಅಪ್‌ನ್ನು ತೆಗೆಯಲು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು. ಮೇಕ್ಅಪ್ ರಿಮೂವರ್ ಬಳಸುವ ಬದಲು ತೆಂಗಿನ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಚರ್ಮವು ಈ ಎಣ್ಣೆಯ ಗುಣಗಳಿಂದ ಪೋಷಣೆಯನ್ನು ಪಡೆಯುತ್ತದೆ.

ತೆಂಗಿನಕಾಯಿಯ ಸಾಬೂನನ್ನು ಬಳಸುವುದರಿಂದ ಕೂದಲು ಉದುರುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಅವುಗಳಲ್ಲಿ ಬಿದ್ದಿರುವ ಅನೇಕ ನೈಸರ್ಗಿಕ ತೈಲಗಳ ಸಾರಗಳು ನಿಮ್ಮ ಕೂದಲನ್ನು ಬೇರಿನಿಂದ ಬಲಪಡಿಸಬಹುದು ಮತ್ತು ಅವುಗಳನ್ನು ಹೆಚ್ಚು ಕಪ್ಪು ಮತ್ತು ದಟ್ಟವಾಗಿಸಬಹುದು.

ನಾವು ದಿನನಿತ್ಯ ಬಳಸುವ ಸಾಬೂನ್ ಗಳಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ನಮ್ಮ ಚರ್ಮದ ಹಲವು ತೊಂದರೆಗಳಿಗೆ ಕಾರಣವಾಗಬಹುದು. ಉತ್ತಮ ಗುಣಮಟ್ಟದ ಸೋಪು ಉಪಯೋಗಿಸದಿದ್ದರೆ, ಶುಷ್ಕತೆ, ಕೆಂಪಾಗುವಿಕೆ, ಮೊಡವೆ, ಕಲೆಗಳು, ಕಿರಿಕಿರಿ ಉಂಟಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ನೈಸರ್ಗಿಕ ಸೋಪುಗಳು ಪರಿಹಾರವನ್ನು ನೀಡುತ್ತದೆ. ನೈಸರ್ಗಿಕ ಸೋಪಿನಲ್ಲಿ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ.

ನೈಸರ್ಗಿಕ ಸೋಪುಗಳನ್ನು ಉಪಯೋಗಿಸುವುದರಿಂದ ಉತ್ತಮವಾದ ಚರ್ಮವನ್ನು ನೀವು ಹೊಂದಬಹುದು.
ಇದ್ದೆಲ್ಲವನ್ನೂ ತಿಳಿದ ನಮ್ಮ ರಾಗ್ರಾನುಲ್ಸ್ ಸಂಸ್ಥೆ ತೆಂಗಿನಕಾಯಿಯ ಸಾಬೂನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಿಮ್ಮ ತ್ವಚೆಯ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *