ಆಯುರ್ವೇದದಲ್ಲಿ ವೃಕ್ಷಾಮಲಕ ಎಂದೇ ಪ್ರಸಿದ್ಧವಾದ ಕೋಕಂ ಅಥವಾ ಮುರುಗಲು ತನ್ನ ಔಷಧೀಯ ಗುಣಗಳಿಗಾಗಿ ಪ್ರಖ್ಯಾತ. ವೈಜ್ಞಾನಿಕವಾಗಿ ಗಾರ್ಸಿನಿಯಾ ಇಂಡಿಕಾ ಎಂದು ಕರೆಸಿಕೊಳ್ಳುವ ಇದನ್ನು ಪಶ್ಚಿಮ ಘಟ್ಟಗಳು ಹಾಗೂ ಅಂಡಾಮಾನ್ ನಿಕೋಬಾರ್ ದ್ವೀಪಗಳಲ್ಲಿ ಕಾಣಬಹುದಾಗಿದೆ.
ಸಣ್ಣ ಟೊಮೇಟೋ ಗಾತ್ರದಲ್ಲಿ ಕೆಂಪುಬಣ್ಣದ ಹಣ್ಣುಗಳು ಒಗರು ಸಿಹಿ ಹುಳಿ ರುಚಿಯೊಂದಿಗೆ ತಿನ್ನಲೂ ಮುದ ನೀಡುತ್ತದೆ. ಆದರೆ ಇದೆಲ್ಲಕ್ಕೂ ಮಿಗಿಲಾಗಿ ಈ ಹಣ್ಣಿನ ತಿರುಳು ತೆಗೆದು ಸಿಪ್ಪೆ ಒಣಗಿಸಿ ಔಷಧಿಗೆ ಬಳಸುವುದು ಮಲೆನಾಡು ಭಾಗದಲ್ಲಿ ಜನಜನಿತ.
ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣುಗಳನ್ನು ನೂರು ಗ್ರಾಂನಷ್ಟು ಬಳಸುವುದರಿಂದ 60 ಕ್ಯಾಲರಿಯಷ್ಟು ಶಕ್ತಿ ಪಡೆಯಬಹುದಾಗಿದೆ. ಫೈಬರ್ ಅಂಶ ಕೂಡಾ ಈ ಹಣ್ಣಿನಲ್ಲಿದ್ದು ನೂರು ಗ್ರಾಂನಲ್ಲಿ 2 ಗ್ರಾಂನಷ್ಟು ಫೈಬರ್ ಅಂಶ ಇದರ ಮಹತ್ವ ಹೆಚ್ಚಿಸುತ್ತದೆ.
ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಸಿ, ಫಾಲಿಕ್ ಆಸಿಡ್, ಕ್ಯಾಲ್ಷಿಯಮ್, ಐರನ್, ಪೊಟಾಷಿಯಂ, ಮ್ಯಾಗ್ನೀಷಿಯಂ, ಮ್ಯಾಂಗನೀಸ್, ಹಾಗೂ ಜಿಂಕ್ ಅಂಶಗಳನ್ನು ಹೊಂದಿರುವ ಮುರುಗಲು ಹಣ್ಣನ್ನು ಜ್ಯೂಸ್ ಹಾಗೂ ನೇರ ಸೇವಿಸುವ ರೀತಿಯಲ್ಲಿ ಔಷಧಕ್ಕೆ ಬಳಸಲಾಗುತ್ತದೆ. ಇದೆಲ್ಲ ಅಂಶಗಳನ್ನು ಗಮನಿಸಿರುವ ರಾ ಗ್ರಾನ್ಯೂಲ್ಸ್ ಸಂಸ್ಥೆ, ಮುರುಗಲು ಸಿಪ್ಪೆಯನ್ನು ಸಂಸ್ಕರಿಸಿ ಶುದ್ಧ ದ್ರವ ರೂಪದಲ್ಲಿ ಜನರಿಗೆ ತಲುಪಿಸುವಲ್ಲಿ ಕಾರ್ಯ ನಿರತವಾಗಿದೆ. ಎಷ್ಟೆಂದರೂ ಮಲೆನಾಡು ಮಣ್ಣಿನ ಸೊಗಡು, ಬೆಳೆದ ಬೆಳೆಯಲ್ಲಿ ತಾನೇ?? ಅದಕ್ಕಾಗಿಯೇ ನಮ್ಮ ಸಂಸ್ಥೆ ಕೋಕಮ್ ಜ್ಯೂಸ್ ಎನ್ನುವ ಹೆಸರಿನಲ್ಲಿ ಈ ಔಷಧವನ್ನು ಮಾರುಕಟ್ಟೆಗೆ ತಲುಪಿಸುತ್ತಿದೆ. ಈ ದ್ರವವನ್ನು ಬಳಸಿ 20 ಗ್ಲಾಸ್ ಗಿಂತಲೂ ಹೆಚ್ವು ರುಚಿಕರ ಕೋಕಮ್ ಜ್ಯೂಸ್ ತಯಾರಿಸುವ ಸೌಲಭ್ಯ ನಮ್ಮ ರಾ ಗ್ರಾನ್ಯೂಲ್ಸ್ ಸಂಸ್ಥೆಯಿಂದ ಲಭ್ಯವಿದೆ.