Blog

Benefits of Brahmi | Brahmi Health Drink

Benefits of Brahmi | Brahmi Health Drink

Benefits of Brahmi

ಮಲೆನಾಡಿನ ಪ್ರಸಿದ್ಧ ಮನೆಮದ್ದು ಬ್ರಾಹ್ಮಿ. ತೇವವಿರುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುವ ಬ್ರಾಹ್ಮಿ ಅಥವಾ ಒಂದೆಲಗ ಎನ್ನುವ ಗಿಡಕ್ಕೆ ಅದರದ್ದೇ ಆದ ವಿಶೇಷತೆಯಿದೆ. ನಿತ್ಯಸೇವನೆ ಹಾಗೂ ಔಷಧಿ ಸಸ್ಯವಾಗಿ ಬಳಕೆಯಲ್ಲಿರುವ ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಆರೋಗ್ಯದಿಂದ ಹಿಡಿದು, ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಲಕ್ಷಾಂತರ ಜನರು ಆಯುರ್ವೇದದ ಈ ಮೂಲಿಕೆಯನ್ನೇ ಆಧರಿಸಿದ್ದಾರೆ.

ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಕೂದಲು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬ್ರಾಹ್ಮಿ ಬಹಳ ಪರಿಣಾಮಕಾರಿಯಾಗಿದೆ. (Benefits of Brahmi)

ಕೂದಲು ಉದುರುವಿಕೆ ಕಡಿಮೆ ಮಾಡುವುದು:

ಬ್ರಾಹ್ಮಿ ಎಣ್ಣೆಯು ಒಣ ನೆತ್ತಿಗೆ ತೇವಾಂಶವನ್ನು ಒದಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆಯಂಟಿ ಆಕ್ಸಿಡೆಂಟ್ ಗುಣಗಳು ನೆತ್ತಿಯನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುವುದು ಮಾತ್ರವಲ್ಲದೇ, ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೂದಲು ಉದುರುವಿಕೆ ಸಮಸ್ಯೆ ಇರುವವರು, ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಪ್ರಯೋಜನಕಾರಿಯಾಗಲಿದೆ.

ತಲೆಹೊಟ್ಟು ನಿವಾರಣೆ: (Benefits of Brahmi)

ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು.

ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು:

ವಯಸ್ಸಾಗುವ ಚರ್ಮಕ್ಕೆ ಒಂದೆಲಗ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು.

ಈ ಗಿಡಮೂಲಿಕೆಯು ಕೊಲಾಜಿನ್ ಉತ್ಪತ್ತಿ ಹೆಚ್ಚಿಸುವುದು. ಕೊಲಾಜಿನ್ ಉತ್ಪತ್ತಿಯು ಕಡಿಮೆಯಾದರೆ ಅದರಿಂದ ನೆರಿಗೆ, ವಯಸ್ಸಾಗುವಾಗ ಮೂಡುವ ಗೆರೆಗಳು ಮೂಡುವುದು. ಒಂದೆಲಗ ಕೊಲಾಜಿನ್ ಉತ್ಪತ್ತಿ ಹೆಚ್ಚಿಸುವ ಕಾರಣದಿಂದಾಗಿ ಇದನ್ನು ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳಲ್ಲಿ ಬಳಸಲಾಗುತ್ತದೆ.

ಸೆಲ್ಯೂಲೈಟ್ ವಿರುದ್ಧ ಹೋರಾಡುವುದು:

ಸೆಲ್ಯೂಲೈಟ್ ವಿರುದ್ಧ ಹೋರಾಡುವುದು :
ಸೆಲ್ಯೂಲೈಟ್ ಬೊಕ್ಕೆ, ಮೊಡವೆ ಉಂಟು ಮಾಡುವ ಅಂಶ ಎಂದು ತಿಳಿಯಬಂದಿದೆ‌.
ಸೆಲ್ಯೂಲೈಟ್ ಕೈಯ ಮೇಲ್ಭಾಗ, ತೊಡೆ ಹಾಗೂ ಪೃಷ್ಠದಲ್ಲಿ ಕಾಣಿಸಿಕೊಳ್ಳುವುದು. ಒಂದೆಲಗ ಈ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡುವುದು. (Benefits of Brahmi)

ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್:

ಸರಿಯಾಗಿ ನಿದ್ದೆ ಬರದಿದ್ದರೆ ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ.

ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾಹೀನತೆಯ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಉಂಟಾಗುತ್ತದೆ. ಆದರೆ ಬ್ರಾಹ್ಮಿ ಸೇವನೆಯಿಂದ ನಿದ್ರಾಹೀನತೆ ತಪ್ಪಿಸಬಹುದಾಗಿದೆ.

ಒಂದೆಲಗದ ಆರೋಗ್ಯ ಲಾಭಗಳು : ಈ ಗಿಡಮೂಲಿಕೆಯನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳುವುದು ರೂಢಿಯಲ್ಲಿದೆ. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿನ ನಿವಾರಣೆಗೆ ಬ್ರಾಹ್ಮಿ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. (Brahmi Health Drink)

ಒಟ್ಟಿನಲ್ಲಿ ಹಲವು ಔಷಧಗಳಿಗೆ ಬಳಕೆಯಾಗುತ್ತಿರುವ‌ ಬ್ರಾಹ್ಮಿ ಎನ್ನುವ ನೈಸರ್ಗಿಕ ಮನೆಮದ್ದನ್ನು, ನಿಯಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳು ದೊರಕುತ್ತದೆ. ಇದನ್ನು ಮನಗಂಡಿರುವ ರಾಗ್ರಾನ್ಯೂಲ್ಸ್ ಸಂಸ್ಥೆ, ಬ್ರಾಹ್ಮಿ ಹೆಲ್ತ್ ಡ್ರಿಂಕ್ಸ್ (Brahmi Health Drink) ಎನ್ನುವ ಹೆಸರಿನಲ್ಲಿ ಬ್ರಾಹ್ಮಿಯ ಉತ್ತಮ ಗುಣಗಳನ್ನು ಸಂಸ್ಕರಿಸಿ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಿದೆ. ಯಥೇಚ್ಛವಾಗಿ ಸಿಗದ ಈ ಎಲೆಯನ್ನು ಬಳಸಿ ತಯಾರಿಸಲಾದ ಈ ಹೆಲ್ತ್ ಡ್ರಿಂಕ್ ನ ನಿತ್ಯಸೇವನೆಯಿಂದ ಅನೇಕ ಲಾಭಗಳು ಕಂಡುಬಂದಿವೆ. (Benefits of Brahmi)

ಉತ್ಪನ್ನದ ವಿವರಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

www.rawgranules.in

Leave a Reply

Your email address will not be published. Required fields are marked *