ನೆಲ್ಲಿಕಾಯಿಯನ್ನು ಹಿಂದಿನಿಂದಲೂ ಆಯುರ್ವೇದದ ಸಿದ್ಧೌಷಧ ಎಂದೇ ಗುರುತಿಸಲಾಗಿದೆ. ಹಿಂದೆ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತಿದ್ದ ನೆಲ್ಲಿಕಾಯಿಯನ್ನು ಇಂದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ಆದರೆ ಅದರಲ್ಲಿದ್ದ ಸತ್ವಕ್ಕಾಗಿಯೇ ಬೆಟ್ಟದ ನೆಲ್ಲಿಕಾಯಿ ಪ್ರಸಿದ್ಧವಾಗಿದೆ.
ಬೆಟ್ಟದ ನೆಲ್ಲಿಲಾಯಿಯ ನಿಯಮಿತ ಸೇವನೆಯಿಂದ ವಿಟಮಿನ್ ಸಿ ಸಮೃದ್ಧವಾಗಿ ದೊರಕಿ ದೇಹಕ್ಕೆ ಪುಷ್ಠಿ ದೊರೆಯುತ್ತದೆ. ಇದಲ್ಲದೆ ಇನ್ನೂ ಅನೇಕ ಕಾರಣಗಳಿಗಾಗಿ ನೆಲ್ಲಿಕಾಯಿ ಜನಜನಿತವಾಗಿದೆ. (Benefits of Amla)
- ಬೆಟ್ಟದ ನೆಲ್ಲಿಕಾಯಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
- ಆರೋಗ್ಯ ಮತ್ತು ಸೌಂದರ್ಯಕ್ಕೆ ನೆಲ್ಲಿಕಾಯಿ
- ಕೆಮ್ಮು ಶೀತ ಮತ್ತು ಶ್ವಾಡಕೋಶದ ಸಮಸ್ಯೆಗಳನ್ನು ದೂರವಿಡುವಲ್ಲಿ ಸಹಾಯಕವಾಗಿದೆ.
- ಕೂದಲು ಉದುರುವುದು, ಬಿಳಿಗೂದಲು, ತಲೆಹೊಟ್ಟು ಸಮಸ್ಯೆಗಳನ್ನು ತಡೆಯುತ್ತದೆ.
- ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟ ಕಲೆಗಳು ಹಾಗೂ ಬಿಸಿಲಿನಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸುವುದು.
- ತಲೆಗೂದಲಿಗೆ ಹಚ್ಚಿ 15 ನಿಮಿಷದ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುವುದು.
- ಮುಖದ ಮೇಲಿನ ಮೊಡವೆಗಳಿಗೆ ಫೇಶಿಯಲ್ ಕ್ರೀಮ್ ರೀತಿ ಕೆಲಸ ನಿರ್ವಹಿಸುವ ನೆಲ್ಲಿಕಾಯಿ, ಹೊಳಪಿನ ತ್ವಚೆ ಹೊಂದಲು ಸಹಾಯ ಮಾಡುತ್ತದೆ.
- ನಿಯಮಿತ ಬಳಕೆಯಿಂದಾಗಿ ಚರ್ಮದ ಸುಕ್ಕುಗಳು, ಗೆರೆಗಳು ನಿವಾರಣೆಯಾಗಿ ಸೌಂದರ್ಯ ಹೆಚ್ಚಾಗಲಿದೆ.
- ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ – ವೈರಲ್ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದರಿಂದ ನಿಮ್ಮ ಚರ್ಮದ ಆರೈಕೆಗಾಗಿ ನೀವು ಅಗತ್ಯ ಪ್ರಮಾಣದಲ್ಲಿ ಇದರ ಸೇವನೆ ಮಾಡಬೇಕು.
ಚರ್ಮದ ನೀರಿನ ಸಣ್ಣ ಸಣ್ಣ ರಂಧ್ರಗಳಲ್ಲಿ ತುಂಬಿಕೊಂಡಿರುವ ಧೂಳು ಮತ್ತು ಕೊಳೆಯ ಅಂಶವನ್ನು ತೆಗೆದು ಹಾಕಿ ಆರೋಗ್ಯಕರ ತ್ವಚೆಯ ನಿರ್ಮಾಣದ ಕಡೆಗೆ ಪರಿಹಾರ ತಂದು ಕೊಡುತ್ತದೆ. - ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ – ಏಜಿಂಗ್ ಗುಣ ಲಕ್ಷಣಗಳು ಸಾಕಷ್ಟು ಕಂಡು ಬರುವ ಕಾರಣ ಜೊತೆಗೆ ವಿಟಮಿನ್ ‘ ಸಿ ‘ ಅಂಶ ಹೆಚ್ಚಾಗಿರುವ ಕಾರಣ ತನ್ನಲ್ಲಿನ ಆಂಟಿ – ಆಕ್ಸಿಡೆಂಟ್ ಅಂಶಗಳ ಪ್ರಭಾವದಿಂದ ನಿಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ನಿಮ್ಮ ತ್ವಚೆಯನ್ನು ಸುಕ್ಕು ಅಥವಾ ಗೆರೆಗಳು ಇಲ್ಲದಂತೆ ರಕ್ಷಣೆ ಮಾಡುತ್ತದೆ.
- ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ಮತ್ತು ಚರ್ಮದ ಮೇಲೆ ಹಚ್ಚುವುದರಿಂದ ತ್ವಚೆಯ ಮೇಲೆ ಕಂಡು ಬರುವ ಕಲೆಗಳ ನಿವಾರಣೆ ಉಂಟಾಗುವುದು
ಮಾತ್ರವಲ್ಲದೆ ನಿಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ಸೋರಿಯಾಸಿಸ್, ಲೆಪ್ರಸಿ, ಇಸುಬು, ಚರ್ಮದ ಅಲರ್ಜಿ ಮತ್ತು ಇನ್ನಿತರ ಚರ್ಮವ್ಯಾಧಿಗಳು ನಿವಾರಣೆಯಾಗುತ್ತವೆ. - ನಿಮ್ಮ ತ್ವಚೆಯ ಶುಚಿತ್ವ ವಿಚಾರಕ್ಕೆ ಬರುವುದಾದರೆ ಬೆಟ್ಟದ ನೆಲ್ಲಿಕಾಯಿ ಒಂದು ಅದ್ಭುತ ಕ್ಲೀನ್ಸರ್ ಎಂದು ಹೇಳಬಹುದು.
- ಏಕೆಂದರೆ ಇದು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಿ ಹೊಳಪಿನ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.
- ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ನಿಮ್ಮ ಚರ್ಮದ ಭಾಗದಲ್ಲಿ ಕೊಲಾಜೆನ್ ಎಂಬ ಅಂಶ ಹೆಚ್ಚಾಗಿ ಉತ್ಪತ್ತಿಯಾಗುವಂತೆ ನೋಡಿಕೊಂಡು ಸುಂದರವಾದ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.
- ಇದಲ್ಲದೇ ನೆಲ್ಲಿಚಕ್ಕೆಯನ್ನು ನೀರಿನಲ್ಲಿ ತೇದು ಸೇವಿಸಿದರೂ ಬಾಯಿಹುಣ್ಣು ಸೇರಿ ಮಲಬದ್ಧತೆ ನಿವಾರಣೆಯವರೆಗೆ ಅನೇಕ ಸಮಸ್ಯೆಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ತ್ರಿಫಲ ಚೂರ್ಣದಲ್ಲಿ ನೆಲ್ಲಿಯನ್ನು ಮುಖ್ಯವಾಗಿ ಸೇರಿಸಲಾಗಿದೆ. (Benefits of Amla)
ಇದೆಲ್ಲ ಅಂಶವನ್ನು ಗಮನಿಸಿರುವ ರಾಗ್ರಾನ್ಯೂಲ್ಸ್ ಸಂಸ್ಥೆ, ಆಮ್ಲ ಹೆಲ್ತ್ ಡ್ರಿಂಕ್ ಎಂಬ ಪಾನೀಯ ತಯಾರಕವನ್ನು ಪರಿಚಯಿಸಿದ್ದು ಬೆಟ್ಟದ ನೆಲ್ಲಿಕಾಯನ್ನು ತಂದು ಸಂಸ್ಕರಿಸಿ, ಅಗತ್ಯ ಅಂಶಗಳನ್ನು ಸೇರಿಸಿ, ನೈಸರ್ಗಿಕ ಆಹಾರವಾಗಿ ಬಳಸಲು ಅನುವು ಮಾಡಿಕೊಟ್ಟಿದೆ.
ಆಸಕ್ತರು ಈ ಕೆಳಗಿನ ಲಿಂಕ್ ಬಳಸಿ ಉತ್ಪನ್ನವನ್ನು ಕೊಳ್ಳಬಹುದಾಗಿದೆ.