ಕೋಕಂ ಹಣ್ಣು ತನ್ನ ಔಷಧೀಯ ಗುಣಗಳಿಗಾಗಿಯೇ ಪ್ರಖ್ಯಾತ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ನಿತ್ಯಸೇವನೆಗೆ ಬಳಸುವ ಅದೆಷ್ಟೋ ಕುಟುಂಬಗಳು ಮಲೆನಾಡಿನಲ್ಲಿವೆ. ಆರೋಗ್ಯದ ಸೂತ್ರ ತಿಳಿಸುವ ಈ ಹಣ್ಣಿನ ಮಹತ್ವ ಇಲ್ಲಿದೆ ನೋಡಿ.
ರೋಗನಿರೋಧಕ ಶಕ್ತಿ: ಬ್ಯಾಕ್ಟೀರಿಯಲ್ ಹಾಗೂ ವೈರಲ್ ಆಗಿ ಬರುವ ಅನೇಕ ರೋಗಗಳಿಗೆ ಕೋಕಂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣು ಕರುಳಿನ ಅಲರ್ಜಿಗಳಿಗೆ ಅತ್ಯಂತ ಉಪಯುಕ್ತವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ತೂಕ ನಿರ್ವಹಣೆ: ಹೈಡ್ರಾಕ್ಸಿಸಿಟ್ಟಿಕ್ ಆಮ್ಲ ಹೊಂದಿರುವ ಕೋಕಂ ಹಣ್ಣು ಬೊಜ್ಜು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅದಲ್ಲದೇ ಅತ್ಯುತ್ತಮ ಫೈಬರ್ ಅಂಶ ಹೊಂದಿರುವುದರಿಂದ ಸಹಜವಾಗಿಯೇ ತೂಕ ಕಡಿಮೆ ಮಾಡುವಲ್ಲಿ ಕೋಕಂ ಉತ್ತಮವೆನಿಸುತ್ತದೆ. ಗಾರ್ಸಿನಿಯಾ ಇಂಡಿಕಾ ಹಣ್ಣು ಬೊಜ್ಜನ್ನು ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸುವುದರಿಂದ ಕೂಡ ತೂಕ ನಿರ್ವಹಣೆಗೆ ಕೋಕಂ ದಿವ್ಯೌಷಧ ಎನಿಸುತ್ತದೆ.
ಉತ್ತಮ ಜೀರ್ಣಕ್ರಿಯೆ: ಆಮ್ಲೀಯತೆ ಹಾಗೂ ಅಜೀರ್ಣ ಸಮಸ್ಯೆಯಿಂದ ಬಳಲುವವರಿಗೆ ಕೋಕಂ ಅತ್ಯುತ್ತಮ ಪೇಯವಾಗಿದ್ದು, ಎದೆಉರಿ ಮೊದಲಾದವನ್ನು ನಿಯಂತ್ರಿಸಿ ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಉಷ್ಣ ಹಾಗೂ ಪಿತ್ಥಕ್ಕೆ:
ಪಿತ್ಥದಿಂದ ತಲೆ ತಿರಿಗುವುದು ಹಾಗೂ ಉಷ್ಣ ಹೆಚ್ಚಾಗಿ ಬಳಲುವುದು ಮೊದಲಾದ ಖಾಯಿಲೆಗಳಿಗೆ ಕೋಕಂ ರಾಮಬಾಣವಾಗಿದೆ. ರಾ ಗ್ರಾನ್ಯೂಲ್ಸ್ ಬೆಲ್ಲದ ಜತೆ ಕೋಕಂ ಸೇವನೆ ಆರೋಗ್ಯಕ್ಕೆ ಹಿತಕಾರಿಯಾಗಿದೆ.
ಹೃದಯಕ್ಕೆ: ಕೋಕಂ ಹಣ್ಣಿನ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆಗಳನ್ನು ದೂರವಿಡಬಹುದಾಗಿದೆ.ರಕ್ತದೊತ್ತಡ ನಿಯಂತ್ರಣ ಮಾಡುವುದಲ್ಲದೇ ಶೂನ್ಯ ಕೊಲೆಸ್ಟ್ರಾಲ್ ಇರುವ ಕೋಕಂ ಮ್ಯಾಗ್ನಿಷಿಯಂ, ಪೊಟ್ಯಾಸಿಯಂ ಮೊದಲಾದ ಪೋಷಕಾಂಶಗಳಿಂದ ಸಂಪುಷ್ಟವಾಗಿದೆ.
ಕ್ಯಾನ್ಸರ್ ಹಾಗೂ ಮಧುಮೇಹಕ್ಕೂ ಔಷಧ: ಆಂಟಿ ಕಾರ್ಸಿನೋಜೀನಿಕ್ ಏಜೆಂಟ್ ಹಾಗೂ ಆಂಟಿಡಯಾಬಿಟಿಕ್ ಅಂಶಗಳನ್ನು ಹೊಂದಿರುವುದರಿಂದ ಇವೆರಡೂ ಖಾಯಿಲೆಗಳು ಬಾರದಂತೆ ತಡೆಯುವಲ್ಲಿ ಕೋಕಂ ಕಾರ್ಯ ನಿರ್ವಹಿಸುತ್ತದೆ.
ಹೀಗೆ ಅನೇಕ ಗುಣಗಳ ಔಷಧಗಣಿ ಎನಿಸಿರುವ ಕೋಕಂ ಅನ್ನು ದ್ರವ ರೂಪದಲ್ಲಿ ಸಂಸ್ಕರಿಸಿ, ರಾ ಗ್ರಾನ್ಯೂಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸುತ್ತಿದೆ. ಅಗತ್ಯವಿದ್ದವರು ಶುದ್ಧ ಕೋಕಂ ಪೇಯಕ್ಕಾಗಿ ರಾಗ್ರಾನ್ಯೂಲ್ಸ್ ಅಧಿಕೃತ ವೆಬ್ ಸೈಟ್ ಗೆ ಸಂಪರ್ಕಿಸಬಹುದಾಗಿದೆ.
ವೆಬ್: www.Rawgranules.in