ಅಂಜೂರ ಹಣ್ಣು ನಗರವಾಸಿಗಳಿಗೆ ಅಷ್ಟೇನೂ ಪರಿಚಿತವಲ್ಲದಿದ್ದರು ಅದರ ಉಪಯೋಗಗಳು ಮಾತ್ರ ಅತ್ಯಂತ ಜನಜನಿತ. ಹಣ್ಣಿನ ಸ್ವಾದ ಹಾಗೂ ಅದರ ಆಕರ್ಷಕ ವರ್ಣಕ್ಕಿಂತಲೂ ಮಿಗಿಲಾಗಿ ಅಂಜೂರದ ಆರೋಗ್ಯ ಲಾಭಗಳು ಅಂಜೂರವನ್ನು ನಿತ್ಯಜೀವನದ ಉಪಯುಕ್ತ ಹಣ್ಣುಗಳಲ್ಲಿ ಒಂದಾಗಿಸಿದೆ. ಹೇರಳವಾಗಿ ದೊರಕದ ಈ ಹಣ್ಣುಗಳಿಗೆ ನಗರಗಳಲ್ಲಿ ಡ್ರಾಗನ್ ಫ್ರೂಟ್ ಹಾಗೂ ಕಿವಿ ಹಣ್ಣಿನಷ್ಟೇ ಬೇಡಿಕೆ ಇದೆ. ಹಾಗಾಗಿ ಇದರ ಉಪಯುಕ್ತತೆ ಬಗ್ಗೆ ತಿಳಿಯಬೇಕಾದ ಅವಶ್ಯಕತೆ ಇದೆ.
ಅಂಜೂರ ಹಣ್ಣು ಸಕ್ಕರೆ, ಕರಗುವ ಫೈಬರ್ ಮತ್ತು ಬಹಳಷ್ಟು ಖನಿಜಾಂಶಗಳನ್ನು ಒಳಗೊಂಡಿದೆ. ತಾಜಾ ಮತ್ತು ಒಣ ಅಂಜೂರ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಅಲ್ಲದೆ ಪೊಟ್ಯಾಸಿಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಎ ಮತ್ತು ವಿಟಮಿನ್ ಎಲ್ ನಂತಹ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳ ಪವರ್‌ಹೌಸ್ ಆಗಿದೆ. ಇದರ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗಿದೆ.
ಅಂಜೂರದ ಆರೋಗ್ಯ ಪ್ರಯೋಜನಕಾರಿ ಗುಣಗಳು ಇಲ್ಲಿದೆ
೧. ಎನರ್ಜಿ
ಅಂಜೂರ ತಿಂದರೆ ದೇಹದಲ್ಲಿ ಶಕ್ತಿಗೆ ಕೊರತೆ ಉಂಟಾಗುವುದಿಲ್ಲ. ಅಂಜೂರದಲ್ಲಿ ವಿಟಮಿನ್, ಸಲ್ಫರ್, ಕ್ಲೋರಿನ್ ಬೇಕಾದಷ್ಟು ಸಿಗುತ್ತವೆ. ಇದರಿಂದ ಎನರ್ಜಿಯ (energy) ಕೊರತೆ ಉಂಟಾಗುವುದಿಲ್ಲ.
೨. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಅಂಜೂರ ಪೊಟ್ಯಾಸಿಯಮ್ ನ ಉತ್ತಮ ಮೂಲವಾಗಿದೆ. ಪೊಟ್ಯಾಸಿಯಮ್ ಒಂದು ಪ್ರಮುಖ ಖನಿಜವಾಗಿದೆ, ಇದು ದೇಹಕ್ಕೆ ಅಗತ್ಯವಾಗಿರುತ್ತದೆ ಮತ್ತು ಇದರ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸೋಡಿಯಂನ ಹಾನಿಕಾರಕ ಪರಿಣಾಮಗಳ ವಿರುದ್ದ ಹೋರಾಡುತ್ತದೆ.
೩. ಕ್ಯಾನ್ಸರ್
ಕ್ಯಾನ್ಸರ್ ನಿಂದ (cancer) ರಕ್ಷಣೆ ಪಡೆಯಲು ಅಂಜೂರ ಸಹಕಾರಿ. ಅಂಜೂರದಲ್ಲಿ ಸಿಗುವ ಪೋಷಕಾಂಶಗಳು ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತವೆ..
೪. ತೂಕ ನಷ್ಟಕ್ಕೆ ಸಹಾಯ ಮಾಡಬಹುದು:
ಫೈಬರ್-ಸಮೃದ್ಧವಾದ ಅಂಜೀರ್ ಒಂದು ಪರಿಪೂರ್ಣ ಹಣ್ಣಾಗಿದೆ. ಇದು ವಿಶೇಷವಾಗಿ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಸಹಕಾರಿಯಾಗುತ್ತದೆ. 2 ಅಥವಾ 3 ಒಣಗಿದ ಅಂಜೂರದ ಹಣ್ಣುಗಳು ನಿಮಗೆ ಹೆಚ್ಚು ಸಮಯದವರೆಗೆ ಹಸಿವು ಆಗದಂತೆ ತಡೆಯುತ್ತದೆ. ಅಲ್ಲದೆ ಇದರಲ್ಲಿರುವ ವಿಟಮಿನ್ B6 ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರೋಟಿನ್ ಗಳನ್ನು ಒಡೆಯಲು ಮತ್ತು ಹೊಸ ಪ್ರೋಟಿನ್ ಗಳನ್ನು ರಚಿಸಲು ನೆರವಾಗುತ್ತದೆ.
೫. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಈ ಹಣ್ಣು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಅಂಜೂರದ ಹಣ್ಣುಗಳು ದೇಹದಲ್ಲಿನ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದಲ್ಲದೆ, ಒಣಗಿದ ಅಂಜೂರದ ಅಧಿಕ ಆ್ಯಂಟಿ ಆಕ್ಸಿಡೆಂಟ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ, ಇದು ದೇಹದಿಂದ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡಿ ಹೃದಯ ಕಾಯಿಲೆಯನ್ನು ತಡೆಯುತ್ತದೆ.
೬. . ಜೀರ್ಣಕ್ರಿಯೆ
ಅಂಜೂರ ತಿಂದರೆ ಜೀರ್ಣ ಕ್ರಿಯೆ (digestion) ಸರಾಗವಾಗಿ ನಡೆಯುತ್ತದೆ. ಹಾಗಾಗಿ ಮಲಬದ್ದತೆ ಉಂಟಾಗುವುದಿಲ್ಲ. ಹೊಟ್ಟೆ ನೋವು, ಗ್ಯಾಸ್ ಕೂಡಾ ಕಡಿಮೆಯಾಗುತ್ತದೆ.
೭. ಸಂತಾನ ಸಮಸ್ಯೆ ನಿವಾರಿಸುತ್ತದೆ
ಅಂಜೂರದ ಹಣ್ಣುಗಳನ್ನು ಫಲವತ್ತತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಮಹಿಳೆಯರಲ್ಲಿ ಅಂಡೋತ್ಪತ್ತಿ ಪ್ರಕ್ರಿಯೆಯಲ್ಲಿ ಕಬ್ಬಿಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪುರುಷರಿಗೆ ಕಬ್ಬಿಣವು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯ ಹೆಚ್ಚಿಸುತ್ತದೆ. ಸಂತಾನೋತ್ಪತ್ತಿಯ ಆರೋಗ್ಯವನ್ನು ಹೆಚ್ಚಿಸಲು ಇದನ್ನು ಹಾಲಿನೊಂದಿಗೆ ಅಂಜೂರ ಬೆರೆಸಿ ಸೇವಿಸಲಾಗುತ್ತದೆ.
ತಾಜಾ ಹಣ್ಣುಗಳು ನೈಸರ್ಗಿಕವಾಗಿ ಹೆಚ್ಚು ಉಪಯೋಗವನ್ನು ಹೊಂದಿದ್ದರೂ ಸಹ ಜನರು ಹಣ್ಣುಗಳನ್ನು ನೇರವಾಗಿ ತಿನ್ನಬಯಸುವುದಿಲ್ಲ. ಹಣ್ಣುಗಳಿಂದ ತಯಾರಾದ ಸಿಹಿ ಖಾದ್ಯ ಗಳು ಹೆಚ್ಚು ರುಚಿಕರವೆನಿಸುತ್ತದೆ. ಇದನ್ನರಿತ ನಮ್ಮ ರಾಗ್ರಾನುಲ್ಸ್ ಸಂಸ್ಥೆ ನಿಮಗಾಗಿ ರುಚಿಯಾದ ಆರೋಗ್ಯಕರವಾದ ಅಂಜೂರ್ ಬರ್ಫಿ ಯನ್ನು ಮಾರುಕಟ್ಟೆಗೆ ಒದಗಿಸಿದೆ.