Mixed vegetable pickle|ಭಾರತೀಯ ಸಂಸ್ಕೃತಿಯಲ್ಲಿ ಉಪ್ಪಿನಕಾಯಿ (Pickle)ಗೆ ಹೆಚ್ಚಿನ ಮಹತ್ವವಿದೆ. ಊಟ ಮಾಡುವಾಗ ಎಷ್ಟೇ ಬಗೆಯ ಸಾರು, ಸಾಂಬಾರು, ಪಲ್ಯ ಮಾಡಿದರೂ ಉಪ್ಪಿನಕಾಯಿ ಬಾಟಲ್ ಅಂತೂ ಪಕ್ಕಕ್ಕೆ ಇರಲೇಬೇಕು. ಹಬ್ಬ, ಹರಿದಿನ, ಯಾವುದೇ ಸಮಾರಂಭವಿರಲಿ ಎಷ್ಟೇ ತರಹೇವಾರಿ ಅಡುಗೆಯನ್ನು ಮಾಡಲಿ, ಉಪ್ಪಿನಕಾಯಿಯಿಲ್ಲದೆ ಮಾತ್ರ ಎಂಥಹಾ ಭೂರಿ ಭೋಜನವೂ ಸಂಪೂರ್ಣವಾಗುವುದಿಲ್ಲ.ತಟ್ಟೆಯಲ್ಲಿ ಮೊದಲ ಪ್ರಾಧಾನ್ಯತೆ ಉಪ್ಪಿನಕಾಯಿಗೇ ಎಂದೇ ಹೇಳಬಹುದು.
ಹಳ್ಳಿಯಲ್ಲೆಲ್ಲಾ ಬೆಳಗ್ಗೆ ಗಂಜಿ, ಮೊಸರಿನೊಂದಿಗೆ ಒಂದು ತುಂಡು ಉಪ್ಪಿನಕಾಯಿ ನೆಂಚಿಕೊಂಡರೆ ಸಾಕು. ಮೊಸರನ್ನಕಂತೂ ಉಪ್ಪಿನಕಾಯಿ ಬೇಕೇ ಬೇಕು. ಗಾಳಿಯಾಡದೇ ಇರುವ ಭರಣಿಯಲ್ಲಿ ಉಪ್ಪಿನಕಾಯಿಯನ್ನು ಹಾಕಿಟ್ಟರೆ ವರ್ಷಗಳ ಕಾಲ ಕೆಡದೇ ಇರುತ್ತದೆ. ಕರಾವಳಿ, ಮಲೆನಾಡ ಕಡೆಯಂತೂ ಮಿಡಿಮಾವಿನಕಾಯಿ ಉಪ್ಪಿನಕಾಯಿ ಫೇಮಸ್. ಅದು ಬಿಟ್ಟರೆ ತರಕಾರಿ ಉಪ್ಪಿನಕಾಯಿ ಒಮ್ಮೆ ಹಾಕಿಟ್ಟರೆ ತಿಂಗಳುಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಏನಪ್ಪಾ ಅಂದ್ರೆ ಹಲ್ಲಿನ ತುದಿಯಲ್ಲಿ ಕಚ್ಚಿ, ಬಾಯೆಲ್ಲಾ ಚಪ್ಪರಿಸಿಕೊಂಡು ತಿನ್ನುವ ಉಪ್ಪಿನಕಾಯಿ ಆರೋಗ್ಯಕ್ಕೂ ಒಳ್ಳೆಯದೆನ್ನುತ್ತಾರೆ.
ಇದೆಲ್ಲವನ್ನೂ ತಿಳಿದ ನಮ್ಮ ರಾಗ್ರಾನುಲ್ಸ್ ಸಂಸ್ಥೆ ರುಚಿಕರವಾದ, ಆರೋಗ್ಯಕರವಾದ ಮಿಶ್ರ ತರಕಾರಿ ಉಪ್ಪಿನಕಾಯಿ ಯನ್ನು ಮಾರುಕಟ್ಟೆಗೆ ಒದಗಿಸಿದೆ. ಖರೀದಿಸಲು ಕೂಡಲೇ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.