ಪಾಲಿಶ್ ಮಾಡದ ಅಕ್ಕಿ ಮಾರುಕಟ್ಟೆಯಲ್ಲಿ ಸಿಗುವುದೇ ದುಸ್ಥರ ಎನ್ನುವ ಸ್ಥಿತಿ ಇಂದಿನ ಮಾರುಕಟ್ಟೆಯಲ್ಲಿದೆ. ಅದರಲ್ಲೂ ಕೆಂಪಕ್ಕಿ ಸಿಗುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕೆಂಪಕ್ಕಿಯ ಆರೋಗ್ಯ ಲಾಭಗಳು ತಿಳಿದಿರುವ ಜನರು ಮಾತ್ರ ಕಷ್ಟಪಟ್ಟು ಹುಡುಕಿಯಾದರೂ ಕೆಂಪಕ್ಕಿ ತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ರೆಡ್ ರೈಸ್ ಅಥವಾ ಕೆಂಪಕ್ಕಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಹೌದು, ಬಿಳಿ ಅಕ್ಕಿ ಉಪಯೋಗಿಸುವವರು ಬ್ರೌನ್ ರೈಸ್ ಮೊರೆ ಹೋಗುತ್ತಿದ್ದಾರೆ. ಬ್ರೌನ್ ರೈಸ್ ತನ್ನ ಪೋಷಕಾಂಶಗಳು ಮತ್ತು ಗುಣಲಕ್ಷಣಗಳಿಂದ ಹೆಸರುವಾಸಿಯಾಗಿದೆ.
ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಸಾಮಾನ್ಯ ಅಕ್ಕಿ ಗೆ ಹೋಲಿಸಿದರೆ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಕರೆಯುವ ಕೆಂಪಕ್ಕಿ ಅನ್ನ ತುಂಬ ವಿಶಿಷ್ಟವಾದದ್ದು. ಇದಕ್ಕೆ ಕಾರಣ ಅದನ್ನು ಸಂಸ್ಕರಿಸುವ ಪ್ರಕ್ರಿಯೆ. ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಅಕ್ಕಿ ನೋಡಲು ಬೆಳ್ಳಗಿರುತ್ತದೆ. ಅಂದರೆ ಅದರ ಮೇಲಿನ ಹೊಟ್ಟು ಮತ್ತು ಜೀವಾಣುವನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಆದರೆ ಕೆಂಪಕ್ಕಿಯ ಸಂಸ್ಕರಣೆಯಲ್ಲಿ ಕೇವಲ ಅದರ ಮೇಲಿನ ಒಟ್ಟು ಮಾತ್ರ ತೆಗೆಯಲಾಗುತ್ತದೆ. ಕೆಂಪಕ್ಕಿಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಜೀವಾಣುಗಳು ಮತ್ತು ನಾರಿನ ಅಂಶ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಸಹಕಾರಿಯಾದ ಪ್ರಯೋಜನಗಳನ್ನು ತಂದುಕೊಡುತ್ತದೆ.
ತೂಕ ನಿರ್ವಹಣೆಯಲ್ಲಿ ಸಹಕಾರಿ..
ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಕೆಂಪಕ್ಕಿ ಸೇವನೆ ಆರಂಭಿಸಿ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಕೆಂಪಕ್ಕಿಯು ಸಹಕಾರಿಯಾಗಿದೆ. ಕೆಂಪಕ್ಕಿಯಲ್ಲಿ ನಾರಿನಾಂಶವಿದ್ದು, ಇದು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ನಾವು ದಿನ ನಿತ್ಯ ಸೇವನೆ ಮಾಡುವ ಬಿಳಿ ಅನ್ನದಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ಪೌಷ್ಟಿಕ ಸತ್ವಗಳು ಕಂಡು ಬರುವುದಿಲ್ಲ. ಆದರೆ ಕೆಂಪಕ್ಕಿ ಅನ್ನದಲ್ಲಿ ಸೆಲೆನಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ನಂತಹ ನಮ್ಮ ದೇಹಕ್ಕೆ ಅಗತ್ಯವಿರುವ ಅತ್ಯದ್ಭುತವಾದ ಪೌಷ್ಟಿಕ ಖನಿಜಾಂಶಗಳು ಕಂಡು ಬರುತ್ತವೆ. ಇದರ ಜೊತೆಗೆ ಕೆಂಪಕ್ಕಿಯಲ್ಲಿ ನಾರಿನ ಅಂಶ ಮತ್ತು ಫೋಲೇಟ್ ಅಂಶ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುತ್ತದೆ. ಕೆಂಪಕ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಇರುವ ಕಾರಣ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಮಾತ್ರ ಇದೊಂದು ಹೇಳಿ ಮಾಡಿಸಿದ ಆಹಾರ ಪದಾರ್ಥ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಬ್ರೌನ್ ರೈಸ್ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಕೆಂಪಕ್ಕಿಯಲ್ಲಿರುವ ನಾರುಗಳು ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಕ್ರಮಬದ್ಧವಾಗಿಡಲು ಸಹಾಯ ಮಾಡುತ್ತದೆ. ಕೊಲೈಟಿಸ್ ಮತ್ತು ಮಲಬದ್ಧತೆಯನ್ನು ಗುಣಪಡಿಸಲು ಬ್ರೌನ್ ರೈಸ್ ನೆರವಾಗುತ್ತದೆ.
ಮಧುಮೇಹದ ಅಪಾಯ ಕಡಿಮೆ:
ಕೆಂಪಕ್ಕಿಯು ಗ್ಲೈಸಮಿಕ್ ಇಂಡೆಕ್ಸ್ (ಜಿಐ -Glycemic Index) ಅನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದಿಲ್ಲ. ಮೂರು ಬಾರಿ ಈ ಅಕ್ಕಿಯಿಂದ ಮಾಡಿದ ಅನ್ನ ಸೇವನೆ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು 32% ರಷ್ಟು ಕಡಿಮೆ ಮಾಡಬಹುದಾಗಿದೆ. ಅದೇ ಬಿಳಿ ಅನ್ನದಿಂದ ಮಧುಮೇಹದ ಅಪಾಯ ಹೆಚ್ಚು. ಬಿಳಿ ಅನ್ನದಿಂದ ಮಧುಮೇಹದ ಅಪಾಯವು 17 % ಹೆಚ್ಚಾಗುತ್ತದೆ.
ತಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ
ಪ್ರಸವಾನಂತರದ ಬಾಣಂತಿಯರ ಆರೋಗ್ಯ ಸುಧಾರಿಸಲು ಬ್ರೌನ್ ರೈಸ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಈ ಅಕ್ಕಿಯ ಸೇವನೆಯು ಬಾಣಂತಿಯರಲ್ಲಿ ಖಿನ್ನತೆ ಮತ್ತು ಆಯಾಸದ ಹಂತಗಳನ್ನು ಸುಧಾರಿಸಲು ಸಹಾಯಕವಾಗಿದೆ. ಪ್ರಸವಾನಂತರದಲ್ಲಿ ಬಾಣಂತಿಯರಿಗೆ ಕಟ್ಟು ನಿಟ್ಟಿನ ಆಹಾರ ನೀಡಲಾಗುತ್ತದೆ. ಈ ವೇಳೆ ಪೋಷಕಾಂಶಗಳ ಕೊರೆತೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬ್ರೌನ್ ರೈಸ್ ಸೇವಿಸುವುದು ಬಾಣಂತಿಯರ ಆರೋಗ್ಯ ಸುಧಾರಿಸುತ್ತದೆ.
ಕ್ಯಾನ್ಸರ್ಗೆ ಔಷಧ:
ಕೆಂಪಕ್ಕಿಯಲ್ಲಿ ಹೇರಳವಾಗಿರುವ ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳು ಸ್ತನ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತದೆ.
ಇದೆಲ್ಲ ಅಂಶಗಳನ್ನು ಗಮನಿಸಿರುವ ರಾ ಗ್ರಾನುಲ್ಸ್ ಸಂಸ್ಥೆ , ಕೆಂಪಕ್ಕಿಯನ್ನು ವಿಶೇಷವಾಗಿ ಸಂಸ್ಕರಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಖರೀದಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.