Blog

Benefits of lemon ginger health drinks |ಶುಂಠಿ-ನಿಂಬೆಯ ಚಮತ್ಕಾರ ಇಲ್ಲಿದೆ ನೋಡಿ!!

Benefits of lemon ginger health drinks

Benefits of lemon ginger health drinks: ಲಿಂಬೆಯಲ್ಲಿ ವಿಟಮಿನ್ ಸಿ, ಬಿ6, ಪಾಲಿಫೆನಾಲುಗಳು, ಟರ್ಪೀನ್, ನಾರಿಂಜಿನ್, ಹೆಸ್ಪರಿಡಿನ್, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ಕರಗುವ ನಾರು ಹೇರಳವಾಗಿದೆ. ಈ ಪಟ್ಟಿಯಲ್ಲಿ ಶುಂಠಿಯೇನೂ ಹಿಂದೆ ಬಿದ್ದಿಲ್ಲ. ಇದರಲ್ಲಿಯೂ ಅವಶ್ಯಕ ತೈಲ, ಬಿಸಾಬೋಲೀನ್, ಜಿಂಜರಾಲ್ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ. ಇದರ ಸೇವನೆಯಿಂದ ತೂಕ ಇಳಿಕೆಯ ಜೊತೆಗೇ ಇನ್ನೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂದುದನ್ನು ತಿಳಿಯೋಣ.

Benefits of lemon ginger health drinks

ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ

ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ನೋವು, ಉರಿ ಅಥವಾ ಹುಳಿತೇಗು ಮೊದಲಾದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಲಿಂಬೆ-ಶುಂಠಿ ಬೆರೆಸಿದ ನೀರನ್ನು ಕುಡಿದುಬಿಡಬೇಕು. ವಿಶೇಷವಾಗಿ ಶುಂಠಿಯಲ್ಲಿರುವ ಪೋಷಕಾಂಶಗಳು ಕ್ಷಾರೀಯವಾಗಿದ್ದು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.

ತೂಕ ಇಳಿಕೆ:

ಶುಂಠಿ ಹಾಗೂ ನಿಂಬೆರಸ ತೂಕ ಇಳಿಕೆಗೆ ಪರಿಣಾಮಕಾರಿಯಾದ ಮನೆಮದ್ದಾಗಿದೆ. ನಿಮಗೆ ಹೊಟ್ಟೆ ಬೊಜ್ಜು ಕರಗಿಸಬೇಕು, ಮೈ ತೂಕ ಕಡಿಮೆಯಾಗಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಬೇಕು, ದೇಹದಲ್ಲಿ ಗ್ಲುಕೋಸ್‌ ಪ್ರಮಾಣವನ್ನು ಕಾಪಾಡಬೇಕು ಎಂದಾದರೆ ನಿಮ್ಮ ಡಯಟ್‌ನಲ್ಲಿ ಈ ಶುಂಠಿ-ನಿಂಬೆ ಪಾನೀಯ ಸೇರಿಸುವುದು ಒಳ್ಳೆಯದು.

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ

ನಿಯಮಿತ ಸೇವನೆಯಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಬುಡದಿಂದ ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿ ನೈಸರ್ಗಿಕ ಕಾಂತಿ ಪಡೆಯುವಂತಾಗುತ್ತದೆ.

ದೀರ್ಘಕಾಲಿಕ ಅಜೀರ್ಣ ಸಮಸ್ಯೆಗೆ ಉತ್ತಮ ಮನೆಮದ್ದು

ಬೆಳಗ್ಗೆ ನಿಂಬೆರಸ ಹಾಗೂ ಶುಂಠಿರಸ ಹಾಕಿರುವ ನೀರು ಕುಡಿಯುವುದರಿಂದ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕಲು ಸಹಕಾರಿ ಹಾಗೂ ಇದು ಆರೋಗ್ಯವನ್ನು ವೃದ್ಧಿಸುವುದು ಎಂದು ಒಂದು ಸಮೀಕ್ಷೆ ಹೇಳಿದೆ.

ಪ್ರಯಾಣದ ವಾಕರಿಕೆಯನ್ನು ತಡೆಯುತ್ತದೆ

ಶುಂಠಿಯಲ್ಲಿರುವ ಕೊಂಚ ಖಾರವಾದ ಜಿಂಜೆರಾಲ್ ಹಾಗೂ ಲಿಂಬೆಯ ಹುಳಿಯಾದ ರುಚಿ ಪ್ರಯಾಣದಲ್ಲಿ ಎದುರಾಗುವ ವಾಕರಿಕೆಯನ್ನು ಇಲ್ಲವಾಗಿಸುತ್ತದೆ.

ಇದನ್ನರಿತ ರಾಗ್ರಾನುಲ್ಸ್ ಸಂಸ್ಥೆ ಆರೋಗ್ಯಕರವಾದ ಲೆಮನ್ ಜಿಂಜರ್ ಪಾನೀಯವನ್ನು ಮಾರುಕಟ್ಟೆಗೆ ಪರಿಚಯಿಸಿದೆ

Leave a Reply

Your email address will not be published. Required fields are marked *