Blog

ಏಲಕ್ಕಿಯ ಆರೋಗ್ಯ ಲಾಭಗಳು ನಿಮಗೆ ತಿಳಿದಿದೆಯೇ?

benefits of cardamom

ಭಾರತದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಏಲಕ್ಕಿ ಅಡುಗೆಯಲ್ಲಿ ಚಮತ್ಕಾರ ತೋರುವ ಸಾಂಬಾರು ಪದಾರ್ಥ. ಆಯುರ್ವೇದದಲ್ಲಿ ದಿವ್ಯೌಷಧ ಎಂದೇ ಕರೆಸಿಕೊಳ್ಳುವ ಏಲಕ್ಕಿ ಬಾಯಿಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಪ್ರಯೋಜಕ. ದೈನಂದಿನ ಆಹಾರದಲ್ಲಿ ಇದರ ಬಳಕೆಯಿಂದಾಗಿ ಪರಿಮಳ ಮಾತ್ರವಲ್ಲ, ಸ್ವಾಸ್ಥ್ಯವೂ ಹೆಚ್ಚುತ್ತದೆ.

ಏಲಕ್ಕಿಯಲ್ಲಿರುವ ಸಿಟ್ರಸಿ ಬಾಯ ದುರ್ಗಂಧ ತೊಲಗಿಸುವುದಲ್ಲದೇ ಅನೇಕ ಅರೋಗ್ಯಕಾರಿ ಗುಣಗಳನ್ನು ಹೊಂದಿದೆ.

ಏಲಕ್ಕಿ ಯಲ್ಲಿ ಫೈಟೋ ಕೆಮಿಕಲ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮಾರಕ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುವ ಗುಣವನ್ನು ಪಡೆದಿದೆ. ಹಾಗೆಂದು ಕ್ಯಾನ್ಸರ್ ಸಮಸ್ಯೆಗೆ ಏಲಕ್ಕಿ ನೇರವಾದ ಪರಿಹಾರ ಎಂದು ಹೇಳಲು ಸಾಧ್ಯವಿಲ್ಲ.
ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಇರುವ ಕಾರಣದಿಂದ ಚರ್ಮದ ಭಾಗದಲ್ಲಿ ಉಂಟಾಗುವ ಗೆಡ್ಡೆಗಳಿಗೆ ಇದು ಪರಿಹಾರವನ್ನು ಒದಗಿಸುತ್ತದೆ ಎಂದು ಊಹಿಸಬಹುದು. ಅಂದರೆ ಕ್ಯಾನ್ಸರ್ ಗೆಡ್ಡೆಗಳ ಗಾತ್ರವನ್ನು ಕಡಿಮೆ ಮಾಡುವ ಲಕ್ಷಣವನ್ನು ಇದು ಪಡೆದಿದೆ.

ಏಲಕ್ಕಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
ಇದರಿಂದ ಹೃದಯದ ಕಾರ್ಯಚಟುವಟಿಕೆಗಳನ್ನು ಅತ್ಯುತ್ತಮ ಪಡಿಸುವ ಸ್ವಭಾವವನ್ನು ಏಲಕ್ಕಿಯಿಂದ ನಿರೀಕ್ಷೆ ಮಾಡಬಹುದು. ಮೊದಲೇ ಹೇಳಿದಂತೆ ಏಲಕ್ಕಿ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶದ ಕಡಿಮೆ ಪ್ರಮಾಣ ವರದಿಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಇದರ ಜೊತೆಗೆ ಹೃದಯಕ್ಕೆ ಹಾನಿಕರ ಎನಿಸುವ ಟ್ರೈಗ್ಲಿಸರೈಡ್ ಅಂಶಗಳ ಪ್ರಮಾಣ ಕೂಡ ಕಡಿಮೆಯಾಗಿತ್ತು. ಇದರಿಂದ ಹೃದಯದ ಆರೋಗ್ಯ ಅತ್ಯುತ್ತಮ ಎನಿಸುವ ಬಗ್ಗೆ ಏಲಕ್ಕಿ ಕೆಲಸ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಗುಣಲಕ್ಷಣಗಳು ಏಲಕ್ಕಿಯಲ್ಲಿ ಸಿಗುತ್ತವೆ.
ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳು ಸಿಗುತ್ತವೆ.
ಸಂಶೋಧಕರು ಹೇಳುವ ಹಾಗೆ ಏಲಕ್ಕಿಯಿಂದ ತಯಾರು ಮಾಡಿದ ಎಣ್ಣೆ ಮನುಷ್ಯನ ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ಎಲ್ಲಾ ಆಯಾಮಗಳಲ್ಲಿ ರಕ್ಷಣೆ ಮಾಡುವ ಗುಣ ಪಡೆದಿದೆ.
ಸಂಶೋಧಕರು ಹೇಳುವ ಹಾಗೆ ಆಯುರ್ವೇದ ಔಷಧಿಗಳನ್ನು ಬಲವಾಗಿ ನಂಬಿರುವ ಜನರಿಗೆ ಏಲಕ್ಕಿ ಗಿಡಮೂಲಿಕೆಯ ಎಣ್ಣೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಪ್ರತಿನಿತ್ಯ ಏಲಕ್ಕಿ ಸೇವಿಸುವುದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರ ಇರಬಹುದು. ಅದರಲ್ಲೂ ರಾತ್ರಿ ಮಲಗುವುದಕ್ಕೂ ಮುನ್ನ ಏಲಕ್ಕಿ ಸೇವಿಸುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆ .
​ಏಲಕ್ಕಿ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಅತಿಸಾರ, ಹೊಟ್ಟೆ ನೋವು ಇತ್ಯಾದಿಗಳನ್ನು ನಿವಾರಿಸಬಹುದು. ಸಣ್ಣ ಏಲಕ್ಕಿ ಸೇವನೆಯು ಜೀರ್ಣಕಾರಿ ಸಮಸ್ಯೆಗಳನ್ನು ಮತ್ತು ಉಬ್ಬುವಿಕೆಯನ್ನು ನಿವಾರಿಸುತ್ತದೆ.

ಒಟ್ಟಿನಲ್ಲಿ ಅನೇಕ ಸಮಸ್ಯೆಗಳಿಗೆ ದಿವ್ಯೌಷಧವಾಗಿ ಕಾರ್ಯನಿರ್ವಹಿಸುವ ಏಲಕ್ಕಿ ಮಲೆನಾಡು ಭಾಗದಲ್ಲಿ ಜನಜನಿತ. ಹಾಗಾಗಿಯೇ ಏಲಕ್ಕಿಯ ಮಹತ್ವವನ್ನು ಅರಿತಿರುವ ರಾ ಗ್ರಾನ್ಯೂಲ್ಸ್ ಸಂಸ್ಥೆ, ಮಲೆನಾಡಿನ ಶುದ್ಧ ಏಲಕ್ಕಿಯನ್ನು ನಗರವಾಸಿಗಳಿಗೆ ತಲುಪಿಸುತ್ತಿದೆ. ಇಂದೇ ಆರ್ಡರ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Disclaimer:
The opinions expressed within this article are the personal opinions of the author. Rawgranules is not responsible for the accuracy, completeness, suitability, or validity of any information on this article. All information is provided on an as-is basis. The information, facts or opinions appearing in the article do not reflect the views of rawgranules and rawgranules does not assume any responsibility or liability for the same.

Leave a Reply

Your email address will not be published. Required fields are marked *